• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • yadgir

yadgir

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕೆಂಪೇಗೌಡರ ಕೊಡುಗೆ ಮಾನವ ಕುಲಕ್ಕೆ ಆದರ್ಶ: ಶರಣಬಸಪ್ಪ
ಕೆಂಪೇಗೌಡರ ಕೊಡುಗೆ ಮಾನವ ಕುಲಕ್ಕೆ ಆದರ್ಶ. ಅವರ ತತ್ವಾದರ್ಶ ಅಳವಡಿಸಿಕೊಂಡು ಮುಂದಿನ ಸಮಾಜಕ್ಕೆ ಕೊಡುಗೆ ನೀಡೋಣ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಠಿಣ ಮತ್ತು ಅವಿರತ ಪ್ರಯತ್ನದ ಮೂಲಕ ಜೀವನದಲ್ಲಿ ಉತ್ತಮ ಗುರಿ ಹೊಂದಲು ಸಾಧ್ಯ. ನಿರಂತರ ಅಭ್ಯಾಸ ಮಕ್ಕಳು ಯಶಸ್ವಿಯಾಗಲು ಸಹಕರಿಸುತ್ತದೆ ಎಂದರು.
ಯೋಜನೆಗಳ ಕಾರ್ಯಪ್ರಗತಿ ಸಮಗ್ರ ಮಾಹಿತಿ ಒದಗಿಸಿ: ಡಾ. ಸುಶೀಲಾ
Provide comprehensive information on progress of projects
ಹಾಲಿನ ದರ ಹೆಚ್ಚಳ ಹಿಂಪಡೆಯಲು ಆಗ್ರಹ
ಏಕಾಏಕಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ₹2.10 ಏರಿಕೆ ಮಾಡಿರುವುದು ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಆಕ್ರೋಶ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತ ಬಡವರಿಗೂ ಉಪಕಾರಿಯಾಗಲಿಲ್ಲ. ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಲಿಲ್ಲ. ಆದರೂ ಹಾಲಿನ ದರ ಗಗನಕ್ಕೇರಿದೆ. ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಮಾದಕ ವಸ್ತು ಸೇವನೆಯಿಂದ ದುಷ್ಪರಿಣಾಮ: ವಾಗ್ಮೋಡೆ
ಮಾದಕ ವಸ್ತುಗಳಾದ ಮದ್ಯ, ತಂಬಾಕು, ಗಾಂಜಾ, ಕೋಕೇನ್, ಓಪಿಯಮ್, ಹೆರಾಯಿನ್, ಎಲ್‌ಎಸ್‌ಡಿ, ಮತ್ತು ನಿದ್ದೆ ಮಾತ್ರೆಗಳ ಚಟವು ಮನುಷ್ಯನ ಮೆದುಳಿನ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಸಿಪಿಐ ಆನಂದ ವಾಗ್ಮೋಡೆ ಹೇಳಿದ್ದಾರೆ.
ಹಂಪಿ ವೈಭವದ ಸ್ಫೂರ್ತಿಯಿಂದ ಬೆಂಗಳೂರು ನಗರ ನಿರ್ಮಾಣ
ಮೊದಲನೆಯ ಕೆಂಪೇಗೌಡರು, ವಿಜಯ ನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೆಗಾರರಾಗಿದ್ದರು. ಆಗ ಹಂಪಿಯ ವೈಭವವನ್ನು ಕಂಡು ಬೆರಗಾಗಿ ಅದರ ಸ್ಫೂರ್ತಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದರು.
ಕಾರಹುಣ್ಣಿಮೆ ಸಂಭ್ರಮದಿಂದ ಆಚರಿಸಿ : ಚೆನ್ನಬಸವ ಶ್ರೀ
ರೈತರು ಸಂಭ್ರಮದಿಂದ ಆಚರಿಸುವ ಮುಂಗಾರು ವರ್ಷದ ಮೊದಲ ಹಬ್ಬವೇ ಕಾರಹುಣ್ಣಿಮೆ. ಕಾರ ಎಂದರೆ ಚೆಲ್ಲು ಅಥವಾ ಬೆಳಕು ಎಂದರ್ಥ. ಮುಂಗಾರು ಮಳೆ ಬಿದ್ದು, ಎಲ್ಲೆಡೆ ಹಸಿರು ಚೆಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಪರಿಯೇ ನಿಜವಾದ ಕಾರಹುಣ್ಣಿಮೆ. ಆದ್ದರಿಂದ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದು ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಹೇಳಿದರು.
ಯಾದಗಿರಿಯ ಸತೀಶ್ ಚವ್ಹಾಣ ರಾಷ್ಟ್ರಕ್ಕೆ 74ನೇ ರ‍್ಯಾಂಕ್
ಯಾದಗಿರಿ ಸಮೀಪದ ಎಂ. ಹೊಸಳ್ಳಿ ತಾಂಡದ ಸತೀಶ್ ಎಸ್. ಚವ್ಹಾಣ ಹೈದ್ರಾಬಾದನ ಪ್ರತಿಷ್ಠಿತ ಶಾಲೆಯಾದ ಸಿ.ಆರ್.ಪಿ.ಎಫ್ (ಸಿಬಿಎಸ್‌ಇ) ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಕೇಂದ್ರ ಪುರಸ್ಕೃತ ಎನ್‌ಟಿಎ ಶ್ರೇಷ್ಠ ಯೋಜನೆಯಡಿ ಸಿಬಿಎಸ್‌ಇ ವಸತಿ ಶಾಲೆಯ(ಪರಿಶಿಷ್ಟ ಜಾತಿ) ಎನ್‌ಟಿಎ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 74ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದಿಂದ ಆಯ್ಕೆಯಾಗಿದ್ದಾನೆ. ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ದೊರಕಿಸಲು ಎನ್.ಟಿ.ಎ ಶ್ರೇಷ್ಠ ಯೋಜನೆಯ ಪ್ರವೇಶ ಪರೀಕ್ಷೆ ಆರಂಭಿಸಿದ್ದು ಈ ಯೋಜನೆಯಡಿ 9 ಮತ್ತು 11ನೇ ತರಗತಿಗೆ ಆಯ್ಕೆ ಮಾಡಲಾಗುತ್ತದೆ.
ಸರ್ಕಾರ ಸಬ್ಸಿಡಿ ನೀಡಿ ಹಳೆ ದರದಲ್ಲೇ ಹಾಲು ಮಾರಾಟ ಮಾಡಲಿ
ನಂದಿನಿ ಹಾಲಿನ ಅರ್ಧ ಲೀಟರ್ ಹಾಗೂ 1 ಲೀಟರ್ ಪ್ಯಾಕೆಟ್ ಗೆ 50 ಎಂ.ಎಲ್. ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಹಾಲಿನ ದರವನ್ನು 2 ರು. ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಗೌಡ ಗೂಗಲ್, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ಕ್ಕೆ ಸರ್ಕಾರ ಸಬ್ಸಿಡಿ ನೀಡಿ ಹಳೆಯ ದರದಲ್ಲೇ ಹಾಲು ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಚಾಲಕರ ಕಾರ್ಯ ಶ್ಲಾಘನೀಯ: ಮೋಹನರಾವ ಕುಲಕರ್ಣಿ
ಪ್ರಯಾಣಿಕರ ಜೀವ ರಕ್ಷಣೆಯ ಹೊಣೆ ಹೊತ್ತು, ನಿತ್ಯ ನೂರಾರು ಕಿ.ಮೀ. ಸಂಚರಿಸುವ ಸರ್ಕಾರಿ ಬಸ್ ಚಾಲಕರ ಕಾರ್ಯ ಶ್ಲಾಘನೀಯ ಎಂದು ಹಿರಿಯ ನಿವೃತ್ತ ಕೆ.ಬಿ.ಜೆ.ಎನ್.ಎಲ್ ನೌಕರ ಮೋಹನರಾವ ಕುಲಕರ್ಣಿ ಅಭಿಪ್ರಾಯಪಟ್ಟರು.
ನೆಲಕ್ಕುರುಳಿದ ವಿದ್ಯುತ್ ಕಂಬ ಶೀಘ್ರ ದುರಸ್ತಿ
ತಾಲೂಕಿನ ಮುದ್ನಾಳ, ವಡಗೇರಾ, ಮಳ್ಳಳ್ಳಿ, ಕ್ಯಾತನಾಳ, ಕಾಡಂಗೇರಾ ಹಾಗೂ ಶಹಾಪುರ ತಾಲೂಕಿನ ಚಟ್ನಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ, ಭಾರೀ ಮಳೆ ಸುರಿದು ಜೋರು ಗಾಳಿ ಬೀಸಿದ ಪರಿಣಾಮ ಗಿಡಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳು ನೆಲಕ್ಕುರುಳಿದ್ದವು. ತಕ್ಷಣ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಸರಿಪಡಿಸುವ ಮೂಲಕ ರೈತರಿಗೆ ನೆರವಾಗಿರುವುದಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾಹಿತಿ ಸಂತಸ ವ್ಯಕ್ತಪಡಿಸಿದ್ದಾರೆ.
  • < previous
  • 1
  • ...
  • 112
  • 113
  • 114
  • 115
  • 116
  • 117
  • 118
  • 119
  • 120
  • ...
  • 228
  • next >
Top Stories
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು : ವಿಚ್ಛೇದನಕ್ಕೆ ಅರ್ಜಿ
ಧರ್ಮಸ್ಥಳ ಗ್ರಾಮ ಅಸ್ಥಿ ಉತ್ಖನನ ಸಸ್ಪೆನ್ಸ್‌
ಟ್ರಂಪ್‌-ಪುಟಿನ್‌ ಭೇಟಿ: ಭಾರತದ ಮೇಲಿನ ಸುಂಕ ಕಡಿತ?
ದೂರುದಾರ ಕೊಟ್ಟ ಸಾಕ್ಷ್ಯಗಳ ಬಗ್ಗೆಯೇ ಎಸ್‌ಐಟಿ ಉತ್ಖನನ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved