45ನೇ ಚೆಸ್ ಒಲಿಂಪಿಯಾಡ್ : ಭಾರತ ಮುನ್ನಡೆ - ಪುರುಷ ಹಾಗೂ ಮಹಿಳಾ ತಂಡಗಳೆರಡೂ ಅಗ್ರಸ್ಥಾನ45ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತೀಯ ತಂಡಗಳು ಗೆಲುವಿನ ಓಟ ಮುಂದುವರಿಸಿವೆ. ಪುರುಷರ ತಂಡ ಅಜರ್ಬೈಜಾನ್ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿದರೆ, ಮಹಿಳಾ ತಂಡ ಕಜಕಸ್ತಾನವನ್ನು 2.5-1.5 ಅಂತರದಲ್ಲಿ ಮಣಿಸಿತು. 5ನೇ ಸುತ್ತಿನ ಬಳಿಕ ಭಾರತ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಅಗ್ರಸ್ಥಾನದಲ್ಲಿವೆ.