ಪೊಲೀಸರ ಅಮಾನತು ಮಾಡದಿದ್ದಕ್ಕೆ ತಹಸೀಲ್ದಾರ್ ಜೀಪ್ ಗೆ ಬೆಂಕಿ
Sep 07 2024, 01:35 AM ISTಬೆಂಗಳೂರಿನ ವಿಧಾನಸೌಧದ ಮುಂಭಾಗ ಬೈಕ್ ಗೆ ಬೆಂಕಿ ಹಚ್ಚಿದ್ದ ಪೃಥ್ವಿರಾಜ್ ಮತ್ತೆ ಚಳ್ಳಕೆರೆಯಲ್ಲಿ ತಹಸೀಲ್ದಾರ್ ಜೀಪಿಗೆ ಬೆಂಕಿ ಇಟ್ಟು ಸುದ್ದಿಯಾಗಿದ್ದಾನೆ. ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿದ ನಂತರ ಪೊಲೀಸರು ಪೃಥ್ವಿರಾಜ್ ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆಗ ತಹಸೀಲ್ದಾರ್ ಜೀಪಿಗೆ ಬೆಂಕಿ ಇಟ್ಟಿದ್ದು ಯಾಕೆ ಎಂದು ಕೇಳಿದ್ದಕ್ಕೆ, ನಾನು ನೀಡಿದ ದೂರಿನನ್ವಯ ಕೇವಲ ಓರ್ವ ಪೋಲೀಸ್ ಪೇದೆಯನ್ನು ಮಾತ್ರ ಅಮಾನತು ಪಡಿಸಲಾಗಿದ್ದು, ಇನ್ನೋರ್ವರ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. ಹಾಗಾಗಿ ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.