ಹಿರಿಯ ನಟಿ ಲೀಲಾವತಿ ತೋಟದಲ್ಲಿ ಚಿರತೆ
Nov 23 2023, 01:45 AM IST: ಹಿರಿಯ ನಟಿ ಡಾ.ಲೀಲಾವತಿಯವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಚಿರತೆ ಓಡಾಟ ಸೆರೆಯಾಗಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿರುವ ತೋಟದ ಗೇಟ್ ಬಳಿ ನ.21ರಂದು ರಾತ್ರಿ ಸುಮಾರು 10.30ರ ವೇಳೆಯಲ್ಲಿ ಸುಮಾರು ಐದೂವರೆ ಅಡಿ ಉದ್ದವಿರುವ ಚಿರತೆ ಕಾಣಿಸಿಕೊಂಡಿದೆ. ಮರುದಿನ ಬೆಳ್ಳಗೆ 10 ಗಂಟೆಯಲ್ಲಿ ನಟ ವಿನೋದ್ ರಾಜ್ ಅವರು ಸಿಸಿ ಕ್ಯಾಮರಾ ಪರಿಶೀಲಿಸಿದ ವೇಳೆ ಚಿರತೆ ಸಂಚಾರ ಕಾಣಿಸಿಕೊಂಡಿದೆ. ಗೇಟ್ ಮುಂದೆ ಚಿರತೆ ಓಡಾಡಿದ್ದು ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ತೋಟದಲ್ಲಿ ಕೆಲಸ ಮಾಡುವವರು ಆತಂಕ ವ್ಯಕ್ತಪಡಿಸಿದ್ದಾರೆ.