65 ಸಾವಿರ ನಿವಾಸಗಳಿಗೆ ಲಾಡು ವಿತರಿಸಿದ ಶಾಸಕ ಗುಡಗುಂಟಿ
Jan 23 2024, 01:47 AM ISTಜಮಖಂಡಿ: ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾನ ರಾಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಜಮಖಂಡಿ ಕ್ಷೇತ್ರಾದ್ಯಂತ 65 ಸಾವಿರ ನಿವಾಸಗಳೀಗೆ 1.30 ಲಕ್ಷಕ್ಕೂ ಅಧಿಕ ಲಾಡುಗಳನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ವಿತರಿಸಿದರು. ನಗರದ ಹನುಮಾನ ಮಂದಿರದ ಮುಂಬಾಗದಲ್ಲಿ ಭವ್ಯ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಲಾಡು ವಿತರಣೆಗೆ ಚಾಲನೆ ನೀಡಿದರು. ನಂತರ ಹನುಮಾನ ದೇವಸ್ಥಾನ, ರಾಮೇಶ್ವರ ದೇವಸ್ಥಾನ, ರಾಘವೇಂದ್ರ ಮಠ, ರಾಮದಾಸ, ಬಾಲಾಜಿ ಮಂದಿರ, ಅಪ್ಪಾಸಾಬ ವಿಠ್ಠಲ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ವೃದ್ದಾಶ್ರಮಕ್ಕೆ ಭೆಟ್ಟಿ ನೀಡಿ ಸಿಹಿ ಹಂಚಿದರು. ಹಾಗೂ ಕ್ಷೇತ್ರಾದ್ಯಂತ 1.30ಲಕ್ಷಕೂ ಅಧಿಕ ಲಾಡುಗಳನ್ನು ವಿತರಿಸಿದರು.