ಹತ್ತಿ ಮಿಶ್ರತಳಿ ಬೀಜ ಅಭಿವೃದ್ಧಿಪಡಿಸಿ ಶ್ವೇತ ಕ್ರಾಂತಿ ಮಾಡಿದ್ದ ಕಲಬುರಗಿ ಕೃಷಿ ವಿಜ್ಞಾನಿ!
Jul 16 2024, 12:41 AM ISTಭಾರತೀಯ ಕೃಷಿ ವಿಜ್ಞಾನ ಅನುಸಂಧಾನ ಪರಿಷತ್ತಿನ ನಿರ್ದೇಶಕರು, ಧಾರವಾಡದ ಕೃಷಿ ವಿವಿಗೆ ಎರಡೆರಡು ಬಾರಿ ಕುಲಪತಿಗಳಾಗಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿರೇ ಬಿರಾಳ ಗ್ರಾಮದ ಶರಣಗೌಡ ಅಯ್ಯನಗೌಡ ಪಾಟೀಲ್ (ಎಸ್ ಎ ಪಾಟೀಲ್) ಕೃಷಿ ವಿಜ್ಞಾನಿಯಾಗಿ (ತಳಿಶಾಸ್ತ್ರ) ಹತ್ತಿ ಬೇಸಾಯದಲ್ಲಿ ವರಲಕ್ಷ್ಮೀ, ಜಯಲಕ್ಷ್ಮೀ ಎಂಬ ಅಂತರ್ ನಿರ್ದಿಷ್ಟ ಮಿಶ್ರತಳಿ ಬೀಜ ಅಭಿವೃದ್ಧಿಸಿ ದೇಶಾದ್ಯಂತ ಶ್ವೇತ ಕ್ರಾಂತಿ ಮಾಡಿದ ಅಪರೂಪದ ಸಾಧಕ.