ಕೊಲೆ ಪ್ರಕರಣ-ಬ್ಯಾಂಕ್ ನೌಕರನ ಬಂಧನ
Oct 31 2023, 01:15 AM ISTಕೊಲೆಯಾದ ಚಂದ್ರಗೌಡ ಹಾಗೂ ಆರೋಪಿ ನಾರಾಯಣಸ್ವಾಮಿ ನಡುವೆ ಹಣದ ವ್ಯವಹಾರ ಹಾಗೂ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದೆ. ಈ ನಡುವೆ ಇಬ್ಬರಲ್ಲಿ ವೈಮನಸ್ಸು ಏರ್ಪಟ್ಟಿತ್ತು. ಕೊಪ್ಪಳ ಬಳಿಯ ಮಂಗಳಾಪುರದ ತೋಟವೊಂದರಲ್ಲಿ ಚಂದ್ರಗೌಡನನ್ನು ಊಟಕ್ಕೆ ಕರೆದು, ಊಟದ ನಂತರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದ ಆರೋಪ ಈತನ ವಿರುದ್ಧ ಕೇಳಿಬಂದಿದೆ. ಆರೋಪಿಯು ಈತನನ್ನು ಕೊಲೆಗೈಯಲು ಆಂಧ್ರಪ್ರದೇಶ ಮೂಲದ ಸುಧೀರಕುಮಾರ ಶ್ರೀಹರಿ ಎಂಬವರಿಗೆ ಸುಪಾರಿ ನೀಡಿ, ಹತ್ಯೆಗೈದಿದ್ದರು.