ನಾವು ದೇವರನ್ನು ನೋಡಿಲ್ಲ ಅಂಬೇಡ್ಕರವರೇ ನಮಗೆ ದೇವರು: ಶಾಸಕ ಡಾ. ಅವಿನಾಶ ಜಾಧವ್
May 02 2025, 12:11 AM ISTಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ರವರು ದೇಶದ ಯಾವುದೇ ಪ್ರಜೆಗೆ ಅನ್ಯಾಯ ಆಗಬಾರದು ಎಂಬ ದಿಟ್ಟ ನಿರ್ಧಾರ ತೆಗೆದುಕೊಂಡು ಸಂವಿಧಾನ ರಚನೆ ಮಾಡಿದ್ದಾರೆ. ಪ್ರತಿಯೊಬ್ಬ ನಾಗರೀಕನಿಗೆ ಅನ್ಯಾಯ ಆಗಬಾರದು ಎಂಬುವುದು ಅವರ ಕನಸಾಗಿತ್ತು, ಅವರು ಸಾಕಷ್ಟು ಕಷ್ವವನ್ನು ಪಟ್ಟು ನಮಗೆ ಸಂವಿಧಾನ ನೀಡಿದ್ದಾರೆ. ನಾವು ದೇವರನ್ನು ನೋಡಿಲ್ಲ ಅಂಬೇಡ್ಕರ್ ಅವರೇ ನಮಗೆ ದೇವರು ಆಗಿದ್ದಾರೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.