ದೇವರು ಬೇರೆ ಅಲ್ಲ, ಬೂತ್ ಕಾರ್ಯಕರ್ತರು ಬೇರೆಯಲ್ಲ: ಬಿ.ವೈ.ರಾಘವೇಂದ್ರ
Apr 01 2024, 12:47 AM ISTಒಂದು ಕಾಲದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲದ ಪರಿಸ್ಥಿತಿ ಬಿಜೆಪಿಗೆ ಇತ್ತು. ಜನಸಂಘದ ಕಾಲದಲ್ಲಿ ಪಕ್ಷ ಸಂಘಟಿಸಿದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ಅವತ್ತೇ ಭಾರತದಲ್ಲಿ ಎರಡು ಧ್ವಜ, ಎರಡು ಸಂವಿಧಾನ ಇರಬಾರದು. ಆರ್ಟಿಕಲ್ 370 ತೆಗೆದುಹಾಕಬೇಕು ಎಂದು ಸಂಕಲ್ಪ ಮಾಡಿದ್ದರು. ಅವರು ಅವತ್ತು ಮಾಡಿದ ಸಂಕಲ್ಪ ಇವತ್ತು ಕಾರ್ಯರೂಪಕ್ಕೆ ಬಂದಿದೆ. ಶ್ರೀರಾಮ ಮಂದಿರ ಆಗಬೇಕು ಎಂದು 500 ವರ್ಷಗಳ ಹಿಂದೆ ಅನೇಕ ಕರ ಸೇವಕರು ಮಾಡಿದ ತ್ಯಾಗ, ಬಲಿದಾನದ ಫಲವಾಗಿ ಇಂದು ಶ್ರೀರಾಮ ಮಂದಿರ ಆಗಿದೆ.