ಗುರುವಿನ ಸ್ಪರ್ಶದಿಂದ ಕಲ್ಲು ಕೂಡ ದೇವರು
Dec 27 2024, 12:48 AM ISTಕನ್ನಡಪ್ರಭ ವಾರ್ತೆ ಇಂಡಿ ಕಲ್ಲು ಸಹ ಶಿಲ್ಪಿಯಿಂದ ಕೆತ್ತಲ್ಪಟ್ಟು ಗುರುವಿನ ಹಸ್ತ ಸ್ಪರ್ಶ ಹಾಗೂ ಮಂತ್ರಗಳಿಂದ ದೇವರ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅದಕ್ಕೆ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು. ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಹಾಗೂ ತಪೋನಿಧಿ ಅನುಷ್ಠಾನ ಮೂರ್ತಿ ಜಡೆಯ ಶಾಂತಲಿಂಗ ಶಿವಾಚಾರ್ಯರಿಂದ ಶ್ರೀ ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.