ಹೊಳೆನರಸೀಪುರ ಪುರಸಭೆ ಅಧ್ಯಕ್ಷರಾಗಿ ಶ್ರೀಧರ್ ಆಯ್ಕೆ
Aug 21 2024, 12:32 AM ISTಹೊಳೆನರಸೀಪುರ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಕೆ. ಶ್ರೀಧರ್, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಪುರಸಭೆಯಲ್ಲಿ ೨೨ ಜೆಡಿಎಸ್ ಸದಸ್ಯರಿದ್ದು, ಅದರಲ್ಲಿ ತ್ರಿಲೋಚನಾ ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದ ಎಚ್.ಕೆ. ಪ್ರಸನ್ನ ತಡವಾಗಿ ಆಗಮಿಸಿ ಅಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ನೂತನ ಅಧ್ಯಕ್ಷರಿಗೆ ಶುಭವನ್ನೂ ಕೋರದೆ ಹೊರನಡೆದರು. ಮತ್ತೊಬ್ಬ ಆಕಾಂಕ್ಷಿ ಆಗಿದ್ದ ಎ. ಜಗನ್ನಾಥ್ ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.