ಸಕಲೇಶಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
Aug 27 2024, 01:37 AM ISTಸಕಲೇಶಪುರ ಪುರಸಭೆ ಚುನಾವಣೆಯ ವೇಳೆ ಪಕ್ಷೇತರ ಸದಸ್ಯರ ಬೆಂಬಲ ಗಳಿಸುವ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜ್ಯೋತಿ ರಾಜ್ಕುಮಾರ್ ೧೫ ಮತಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಇವರ ಎದುರಾಳಿ ಅನ್ನಪೂರ್ಣ ಐದು ಮತ ಗಳಿಸಲಷ್ಟೆ ಶಕ್ತವಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಝರೀನಾ ೧೫ ಮತ ಪಡೆಯುವ ಮೂಲಕ ಉಪಾಧ್ಯಕ್ಷರಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೇಶ್ಮಾಭಾನು ಐದು ಮತ ಪಡೆದು ಸೋಲು ಅನುಭವಿಸಿದರು. ಬಿಜೆಪಿ ಸದಸ್ಯರು ಚುನಾವಣೆಯಿಂದ ದೂರ ಉಳಿಯುವ ಮೂಲಕ ಮೈತ್ರಿಧರ್ಮ ಪಾಲನೆಗೆ ಎಳ್ಳುನೀರು ಬಿಟ್ಟರು.