ಬಿತ್ತನೆ ಬೀಜ ಕಳಪೆ: ಕೈಕೊಟ್ಟ ಸೂರ್ಯಕಾಂತಿ ಬೆಳೆ
Aug 14 2024, 12:46 AM ISTಬೀರೂರು, ಎರಡು ತಿಂಗಳ ಹಿಂದಷ್ಟೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಖರೀದಿಸಿ, ತಮ್ಮ ಜಮೀನುಗಳಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದ ರೈತರು, ಎಲ್ಲಾ ಪೋಷಕಾಂಶ ನೀಡಿದ್ದರೂ ಗಿಡ ಕಾಳುಕಟ್ಟಿಲ್ಲ. ಬಾರದ ಬೆಳೆಗೆ ಕೃಷಿ ಇಲಾಖೆಯೇ ಕಾರಣ ಎಂದು ಆರೋಪಿಸಿರುವ ಜೋಡಿತಿಮ್ಮಾಪುರ, ದೋಗೆಹಳ್ಳಿ ,ಹುಲ್ಲೇಹಳ್ಳಿ ರೈತರು ಶಾಸಕ ಆನಂದ್ಗೆ ಪರಿಹಾರ ನೀಡುವಂತೆ ಮಂಗಳವಾರ ಒತ್ತಾಯಿಸಿದರು.