ಮೊಬೈಲ್ ವ್ಯಾಮೋಹದಿಂದ ಓದುವ ಹವ್ಯಾಸ ಕಡಿಮೆಯಾಗಿದೆ
Dec 02 2024, 01:17 AM ISTಇಂಗ್ಲೀಷ್ ವ್ಯಾಮೋಹ ಬಿಟ್ಟು ಹಲವಾರು ಶತಮಾನಗಳಿಂದ ಬಳಕೆಯಲ್ಲಿರುವ ಜತೆಗೆ ಜೀವಂತ ಭಾಷೆಯಾಗಿರುವ, ನಮ್ಮ ನಾಡು, ನುಡಿ, ಸಂಸ್ಕೃತಿಯ ಪ್ರತೀಕವಾದ ಕನ್ನಡ ಭಾಷೆ ಬಳಕೆಯಿಂದ ಮುಂದಿನ ತಲೆಮಾರಿಗೆ ಕನ್ನಡದ ಹಿರಿಮೆಯನ್ನು ಪಸರಿಸಲು ಸಾಧ್ಯವೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಅಭಿಪ್ರಾಯಪಟ್ಟರು. ಇಂದಿನ ಮೊಬೈಲ್ ವ್ಯಾಮೋಹದಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶ್ರೇಷ್ಠ ಕೃತಿಗಳ ಬಗ್ಗೆ ಅಧ್ಯಯನ ಮತ್ತು ಚರ್ಚೆ ಪ್ರತಿ ಮನೆಯಲ್ಲೂ ನಡೆಯಬೇಕಿದೆ ಎಂದು ಸಲಹೆ ನೀಡಿದರು.