ಟಿವಿ ಮೊಬೈಲ್ ದೂರವಿಟ್ಟು ಪುಸ್ತಕಗಳನ್ನು ಓದಿ
Oct 23 2024, 12:50 AM ISTಟಿವಿ, ಮೊಬೈಲ್‌ಗಳನ್ನು ಬದಿಗೊತ್ತಿ, ಸಾಮಾಜಿಕ ಮಾಧ್ಯಮಗಳಲ್ಲಿ ತಲ್ಲೀನರಾಗುವ ಬದಲು ವಿದ್ಯಾರ್ಥಿಗಳು ಪುಸಕ್ತಗಳನ್ನು ಸ್ನೇಹಿತರಾಗಿ ಮಾಡಿಕೊಂಡು, ಸತತ ಅಭ್ಯಾಸ ಮಾಡುವ ಮೂಲಕ ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ದೇವರ ಸೇವೆಗಿಂತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುವುದು ಉತ್ತಮ ಎಂದು ನಾವು ತಿಳಿದುಕೊಂಡು, ತಾಲೂಕಿನಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. ಕಾಲೇಜಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸುವುದಾಗಿ ಶಾಸಕರು ಹೇಳಿದರು.