ಈ ಬಾರಿ ಬಜೆಟ್ನಲ್ಲಿ ಹಾಸನ ಜಿಲ್ಲೆಯನ್ನು ಮರೆತಿದ್ದಾರೆ
Mar 11 2025, 12:48 AM ISTಈ ಬಾರಿ ರಾಜ್ಯದ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯನ್ನು ಮರೆತಿದ್ದಾರೆ. ಅಭಿವೃದ್ಧಿಗಳ ಬದಲಿಗೆ ನಮ್ಮ ಜಿಲ್ಲೆಗೆ ಎಣ್ಣೆ, ಜೂಜು, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯು ಕರ್ನಾಟಕ ಬಜೆಟ್ ಪುಸ್ತಕದಲ್ಲಿ ಇಲ್ಲ. ದೆಹಲಿ ಬಜೆಟ್ ಬುಕ್ನಲ್ಲಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು. ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದರು. ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ. ಮಟ್ಕಾ, ಜೂಜು, ಮದ್ಯ ಸೇವನೆಯಿಂದ ಜನರ ಮನೆಗಳ ಹೆಣ್ಣುಮಕ್ಕಳು ಒಡವೆ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.