ತೀವ್ರವಾಗಿ ಕಾಡುವ ಕ್ರೈಮ್ ಥ್ರಿಲ್ಲರ್ಒಂದು ರಾತ್ರಿ ವಿಲ್ಸನ್ ಬದುಕಿನಲ್ಲಿ ನಡೆಯುವ ಘಟನಾವಳಿಗಳೇ ಸಿನಿಮಾದ ತಿರುಳು. ನಗರದಲ್ಲಿ ನಡೆಯುವ ಸರಣಿ ಕೊಲೆಗಳು, ಪಾತಕಿಗಳಿಗಾಗಿ ಎಸಿಪಿ ಲಕ್ಷ್ಮಿಯ ತೀವ್ರ ಶೋಧ, ಕ್ರಿಮಿನಲ್ಗಳ ಆಟಾಟೋಪ, ತಬ್ಬಲಿಗಳ ಕಣ್ಣೀರಿನ ಕಥೆಯ ಎಳೆಗಳೂ ಸೇರಿ ಚಿತ್ರದ ತೀವ್ರತೆ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ.