ಹುಟ್ಟುಹಬ್ಬದ ದಿನ ನಾನು ಊರಲ್ಲಿರುವುದಿಲ್ಲ: ಯಶ್ಈ ವರ್ಷವೂ ನಟ ಯಶ್ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಜ.8ರಂದು ಯಶ್ ಅವರ ಹುಟ್ಟುಹಬ್ಬ. ‘ಟಾಕ್ಸಿಕ್’ ಸಿನಿಮಾ ಘೋಷಣೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಯಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಯೋಜಿಸಿದ್ದರು. ಆದರೆ ಯಶ್, ಅವತ್ತು ತಾನು ಹೊಸ ಸಿನಿಮಾದ ಕಾರ್ಯ ನಿಮಿತ್ತ ಊರಲ್ಲಿ ಇರುವುದಿಲ್ಲವಾದ್ದರಿಂದ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.