ಕಸಾಯಿಖಾನೆಗೆ ಅಕ್ರಮ ಸಾಗಾಟದ ವೇಳೆ ಪಿಕ್ ಅಪ್ ಪಲ್ಟಿ: ಹಸು ಸಾವುಚಾಮರಾಜನಗರ:ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಪಲ್ಟಿಯಾಗಿ ಹಸು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಸಮೀಪ ನಡೆದಿದೆ. ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು ಹಸುವೊಂದು ಮೃತಪಟ್ಟಿದೆ, ಎರಡು ಎಮ್ಮೆ, ಎಂಟು ಹಸುಗಳು ಬದುಕುಳಿದಿವೆ.