ಹಾರ್ಮೋನಿಯಂ ಕಲಾವಿದನಿಗೆ ಕೌಜಲಗಿ ನಿಂಗಪ್ಪ ಪ್ರಶಸ್ತಿಮಹಾಲಿಂಗಪುರ: ಸಮೀಪದ ಮದಭಾಂವಿ ಗ್ರಾಮದ ಪೇಟೆ ಮಾಸ್ತರ್ ಎಂಬ ಖ್ಯಾತಿ ಪಡೆದಿರುವ ಹಾರ್ಮೋನಿಯಂ ಕಲಾವಿದ ರಾಮಪ್ಪ ನಿಂಗಪ್ಪ ಮಾಳಿ ಅವರಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ ದೊರೆತಿದೆ. ಬಾಗಲಕೋಟ ಜಿಲ್ಲಾ ಸಂಚಲನದಲ್ಲಿ, ಬ್ಯಾಕೋಡ ಗ್ರಾಮದ ಲಕ್ಕಮ್ಮದೇವಿ ಕಲಾಪೋಷಕ ಸಂಘದವರು ಬಾದಾಮಿಯಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ದ್ವಿತೀಯ ಬಯಲಾಟ ಉತ್ಸವ, 4ನೇ ಜಾನಪದ ನೃತ್ಯ ಕಲಾ ಉತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು