ದಣಿವರಿಯದ ಕಾಯಕಯೋಗಿ ಡಾ.ಎಸ್.ಬಿ.ದಂಡಿನಕನ್ನಡಪ್ರಭ ವಾರ್ತೆ ಬಾಗಲಕೋಟೆ: ಡಾ.ಎಸ್.ಬಿ.ದಂಡಿನ ಅವರು ತೋಟಗಾರಿಕೆ, ರೇಷ್ಮೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಮತ್ತು ಅದ್ಭುತ ದಾಖಲೆ. ನೂರಾರು ಸಂಕಷ್ಟಗಳನ್ನು ಎದುರಿಸಿ ಕಟ್ಟಿ ಬೆಳೆಸಿದ ಬಾಗಲಕೋಟೆ ತೋಟಗಾರಿಕೆಯ ವಿಶ್ವವಿದ್ಯಾಲಯ ಇಂದು ನಮಗೆ ಸಾಕ್ಷಿಯಾಗಿದೆ ಎಂದು ಚಿತ್ತರಗಿ-ಇಳಕಲ್ಲ ಸಂಸ್ಥಾನಮಠದ ಮ.ನಿ.ಪ್ರ.ಗುರುಮಹಾಂತ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.