ಸರಳತೆಯ ಸಹಾನಭೂತಿ ಸಿದ್ದೇರ್ಶವರ ಶ್ರೀಕನ್ನಡಪ್ರಭ ವಾರ್ತೆ ಮುಧೋಳ ಸಿದ್ದೇಶ್ವರ ಶ್ರೀಗಳು ಸರಳತೆಗೆ ಒತ್ತು ನೀಡುವ ಮೂಲಕ ವಿನಯ, ಸಹಾನುಭೂತಿ ಮತ್ತು ಸೇವೆಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ತೋರಿಸಿದ್ದಾರೆ ಎಂದು ಬಾಗಲಕೋಟೆ ಬ.ವಿ.ವಿ ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.ನಗರದ ಹೇಮರಡ್ಡಿ ಮಲಮ್ಮ ಸಭಾಂಗಣದಲ್ಲಿ ಶಶಿ ಟ್ರಸ್ಟ್ ಕವಿ ಚಕ್ರವರ್ತಿ ರನ್ನ ಮುಧೋಳ ಆಯೋಜಿಸಿದ್ದ ಯೋಗಸ್ಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲೇಖಕರು ಮಹಾಸ್ವಾಮೀಜಿಯವರ ಗಮನಾರ್ಹ ವ್ಯಕ್ತಿತ್ವ, ಆಧ್ಯಾತ್ಮಿಕ ಪರಂಪರೆಯ ಸಾರವನ್ನು ಗ್ರಂಥದಲ್ಲಿ ವಿವರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.