ಮೊಬೈಲ್ ಬಳಕೆಯಿಂದ ಭವಿಷ್ಯ ಹಾಳುಯುವಜನತೆಯ ಮನಸ್ಸುಗಳಿಂದು ಬಹುತೇಕ ಓದು, ಬರಹದ ಅಭಿರುಚಿ ಕಳೆದುಕೊಳ್ಳುತ್ತಲ್ಲಿದೆ. ಅವರಲ್ಲಿ ಅಧ್ಯಯನಶೀಲತೆ ಮರೆಯಾಗುತ್ತಲ್ಲಿದೆ. ಅನಗತ್ಯ ದುಗುಡ, ದುಮ್ಮಾನ ಜೊತೆಗೆ ಮೊಬೈಲ್ ಲೋಕದಲ್ಲಿ ಮುಳುಗಿ ಸ್ವಚ್ಛಂದವಾಗಿ ವಿಹರಿಸುತ್ತಿದೆ. ಇದರಿಂದ ಶೈಕ್ಷಣಿಕ ಪ್ರಗತಿ ಹಿನ್ನೆಡೆಯಾಗುತ್ತಿದೆ. ಸಮಾಜದಲ್ಲಿ ಹೆಚ್ಚು ಯುವಕರು ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುತ್ತಿರುವುದು ತೀವ್ರ ನೋವಿನ ಸಂಗತಿ ಎಂದು ಜಮಖಂಡಿಯ ವಿಶ್ರಾಂತ ಶಿಕ್ಷಕ ಡಿ.ಎಸ್.ಕುಂಬಾರ ಹೇಳಿದರು.