ಬನಹಟ್ಟಿ: ಭಾರಿ ಮಳೆಗೆ ಕುಸಿದು ಬಿದ್ದ ಮೈದಾನದ ಗೋಡೆಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಅವಳಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಸೋಮವಾರ ಪೇಟೆ, ಮಂಗಳವಾರ ಪೇಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳೆಲ್ಲವೂ ಹಳ್ಳದಂತೆ ಕಂಡು ಬಂದವು. ರಸ್ತೆಗಳು ಜಲಾವೃತವಾಗಿ ವಾಹನಗಳು ಹಾಗೂ ಜನರ ಸಂಚಾರಕ್ಕೆ ಪರದಾಟವನ್ನು ನಡೆಸಿದರು. ಇನ್ನು, ಇಲ್ಲಿಯ ಎಸ್‌ಆರ್‌ಎ ಕಾಲೇಜು ಮೈದಾನಕ್ಕಿರುವ ತಡೆಗೋಡೆಯು ನೀರಿನ ರಭಸಕ್ಕೆ ಕುಸಿದು ಬಿದ್ದಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೀರಿನ ರಭಸ ಜೋರಾಗಿದ್ದದ್ದರಿಂದ ತಡೆಯ ಅರ್ಧಭಾಗ ಕುಸಿದು ಬಿದ್ದಿತು.