ಫಲಶ್ರೇಷ್ಠ ರೈತರು ರೈತರಿಗೆ ಮಾದರಿಯಾಗಲಿ: ಪಿ.ಸಿ. ಗದ್ದಿಗೌಡರಬಾಗಲಕೋಟೆ: ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ಮೇಳ -2024ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸದ ಪಿ.ಸಿ. ಗದ್ದಿಗೌಡರ, ಹಣ್ಣು-ಹಂಪಲುಗಳು ನೋಡಲು ಆಕರ್ಷಣೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳ ಸಹಾಯಕಾರಿಯಾಗಿವೆ. ಆದರೆ, ಇಂದು ಆಹಾರ ಸೇವನೆಯೇ ವಿಷಯುಕ್ತ ಆಗಿರುವುದರಿಂದ ರೈತರು ಎಚ್ಚೆತ್ತುಕೊಂಡು ವಿಷಮುಕ್ತ ಆಹಾರ ಜನತೆಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಿಯಾದ ಮಾಹಿತಿಯನ್ನು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಮಾಹಿತಿ ಪಡೆದು ತೋಟಗಾರಿಕೆ ಬೆಳೆ ಬೆಳೆಯಬೇಕು ಎಂದು ರೈತರಿಗೆ ಸಲಹೆ ನೀಡಿದರು.