• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ನಮ್ಮದು ಪ್ರಪಂಚದಲ್ಲೇ ಉತ್ಕೃಷ್ಟ ಸಂವಿಧಾನ: ಶಾಸಕ ಸಿದ್ದು ಸವದಿ
ರಬಕವಿ-ಬನಹಟ್ಟಿ: ಶುಕ್ರವಾರ ಬನಹಟ್ಟಿಯ ಎಸ್‌ಟಿಸಿ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಸಂವಿಧಾನ ಜಾಗೃತಿ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ೧೯೨೬ರಲ್ಲಿ ಜ.೨೬ರಂದು ಲಾಹೋರ್‌ನಲ್ಲಿ ಪ್ರಥಮ ಬಾರಿಗೆ ಹಾರಿದ ನಮ್ಮ ರಾಷ್ಟ್ರಧ್ವಜ ಇಂದಿಗೂ ಚಿರಸ್ಥಾಯಿಯಾಗಲು ನಮ್ಮ ದಕ್ಷ ಸಂವಿಧಾನ ಕಾರಣವಾಗಿದೆ ಎಂದು ಹೇಳಿದರು.
ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯ ಪ್ರಾಪ್ತಿ: ನೀಲಕಂಠ
ರಬಕವಿ-ಬನಹಟ್ಟಿ: ರಬಕವಿಯ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ದಾಸೋಹ ಸೇವಾ ಕಾರ್ಯ ಆಯೋಜಿಸಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್‌ ಧುರೀಣ ನೀಲಕಂಠ ಮುತ್ತೂರ, ಎಲ್ಲ ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯಾರ್ಥವಿದೆ. ಅನ್ನದಾಸೋಹ ಶರಣ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ನಗರಸಭೆ ಆಯವ್ಯಯ ಅಂದಾಜು ಪತ್ರಿಕೆಗೆ ಅನುಮೋದನೆ: ಆಯುಕ್ತ ರಮೇಶ ಜಾಧವ
ಬಾಗಲಕೋಟೆ: ನಗರಸಭೆಯ 2024-25ನೇ ಸಾಲಿನ ನಿರೀಕ್ಷಿಸಲಾದ ಆದಾಯ ಮತ್ತು ವೆಚ್ಚಗಳಿಗೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಜಾನಕಿ ಕೆ.ಎಂ. ಅನುಮೋದನೆ ನೀಡಿದ್ದಾರೆ ಎಂದು ಆಯುಕ್ತ ರಮೇಶ ಜಾಧವ ತಿಳಿಸಿದ್ದಾರೆ. ನಗರದ ಜನೆತೆಗೆ ಮೂಲ ಸೌಲಭ್ಯ ಒದಗಿಸುವುದು ನಗರಸಭೆಯ ಆದ್ಯ ಕರ್ತವ್ಯ ಆಗಿರುವುದರಿಂದ ಸಂಪನ್ಮೂಲ ಕ್ರೋಢೀಕರಿಸಿ ನಗರದ ನೀರು ಪೂರೈಕೆ, ಸ್ವಚ್ಛತೆ, ಘನತ್ಯಾಜ್ಯ ವಸ್ತುಗಳ ವಿಲೇವಾರಿ, ಬೀದಿ ದೀಪಗಳ ನಿರ್ವಹಣೆ, ನಗರದ ಚರಂಡಿ, ರಸ್ತೆ, ಶೌಚಾಲಯಗಳ ವ್ಯವಸ್ಥೆಯಂಥ ಅನೇಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸಲು ಅನುದಾನ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ತೋವಿವಿ ಉದ್ಯಾನಗಿರಿಯಲ್ಲಿ ತೋಟಗಾರಿಕೆ ಮೇಳ
ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉದ್ಯಾನಗಿರಿಯಲ್ಲಿ ಫೆ.10 ರಿಂದ 12 ವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಫೆ.10ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದಲಿತರು ಬಲಗೊಳ್ಳಲು ಬಿಜೆಪಿ ಬಲಗೊಳಿಸಿ: ಚಲುವಾದಿ ನಾರಾಯಣಸ್ವಾಮಿ
ಬಾಗಲಕೋಟೆ: ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗೆಳು ಹಾಗೂ ಬಿಜೆಪಿ ಚಿಂತನೆಗಳು ಮಧ್ಯೆ ಸಾಮ್ಯತೆ ಇದೆ. ಹೀಗಾಗಿ ನಾವು ಬಲಗೊಳ್ಳಬೇಕಾದರೆ ಭಾರತೀಯ ಜನತಾ ಪಕ್ಷವನ್ನು ಬಲಗೊಳಿಸಬೇಕು. ಬಿಜೆಪಿಯಿಂದ ಮಾತ್ರ ದೀನದಲಿತರಿಗೆ ನ್ಯಾಯ ಸಿಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಚೆಲುವಾದಿ ನಾರಾಯಣಸ್ವಾಮಿ ಹೇಳಿದರು. ನವನಗರದಲ್ಲಿನ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡ ಬಲವರ್ಧನೆಗಾಗಿ ಭೀಮ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜಾನುವಾರು ಜಾತ್ರೆ: ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ
ಬಾದಾಮಿ: ಕರೋನಾ ಸೇರಿದಂತೆ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಬಾದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿನ ಜಾನುವಾರು ಜಾತ್ರೆ ಆರಂಭವಾಗಿದ್ದು, ಜಾತ್ರೆಯಲ್ಲಿ ಉತ್ತಮ ಜಾನುವಾರುಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪ್ರಶಸ್ತಿ ನೀಡಿ ಗೌರವಿಸಿದರು.
ಕುಲಹಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಥಾಗೆ ಅದ್ಧೂರಿ ಸ್ವಾಗತ
ರಬಕವಿ-ಬನಹಟ್ಟಿ: ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರ್ಣ ಹಿನ್ನಲೆಯಲ್ಲಿ ಕಳೆದ ಜ.೨೬ ರಿಂದ ಆರಂಭವಾಗಿರುವ ಸಂವಿಧಾನ ಜಾಗೃತಿ ಜಾಥಾವು ಗುರುವಾರ ತಾಲೂಕಿನ ಕುಲಹಳ್ಳಿ ಗ್ರಾಮಕ್ಕೆ ಆಗಮಿಸಿತು.ಗ್ರಾಮದ ವಿವಿಧ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಮೂಲಕ ಬೃಹತ್ ಮೆರವಣಿಗೆ ನಡೆಯಿತು. ಡೊಳ್ಳು, ಭಾಜಾ, ಭಜಂತ್ರಿ ಸೇರಿದಂತೆ ವಿವಿಧ ವಾದ್ಯಮೇಳಗಳಿದ್ದವು.
ಸಮಸಮಾಜ ನಿರ್ಮಾಣದಲ್ಲಿ ಸಂವಿಧಾನದ ಕೊಡುಗೆ ಅಪಾರ: ಭೀಮಸೇನ ಚಿಮ್ಮನಕಟ್ಟಿ
ಗುಳೇದಗುಡ್ಡ: ಈ ದೇಶದ ಎಲ್ಲರ, ಅದರಲ್ಲಿಯೂ ತಳಸಮುದಾಯಗಳ, ಶೋಷಿತರ ಆಶಾಕಿರಣವಾಗಿದ್ದೆ. ಭಾರತದ ಸಂವಿಧಾನ, ಸಮಾನತೆ, ಶೋಷಿತರ ರಕ್ಷಣೆ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಪರಿಪಾಲನೆಯಲ್ಲಿ ಸಮಸಮಾಜದ ನಿರ್ಮಾಣದಲ್ಲಿ ಸಂವಿಧಾನದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಗುರುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಸ್ಪಂದನ ಕಾರ್ಯಕ್ರಮ: ಜಿಲ್ಲೆಗೆ ಸಂಬಂಧಿಸಿದ 11 ಅರ್ಜಿಗಳಲ್ಲಿ ನಾಲ್ಕು ಇತ್ಯರ್ಥ
ಬಾಗಲಕೋಟೆ: ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಂಬಂಧಿಸಿದ 11 ಅರ್ಜಿಗಳು ಸ್ವೀಕೃತಗೊಂಡಿದ್ದು, ಅದರಲ್ಲಿ ನಾಲ್ಕು ಅರ್ಜಿಗಳನ್ನು ಇತ್ಯರ್ಥಪಡಿಸಲಾಯಿತು. ಗುರುವಾರ ನಡೆದ ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಬಾಗಲಕೋಟೆಯಿಂದ ವಿಡಿಯೋ ವರ್ಚುವಲ್ ಮೂಲಕ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ್ ಅವರು ಭಾಗಿಯಾಗಿದ್ದರು.
ತಾಲೂಕಿಗೊಂದು ಮಹಿಳಾ ಸೂಪರ್ ಮಾರ್ಕೆಟ್: ಶಶಿಧರ ಕುರೇರ್
ಬಾಗಲಕೋಟೆ: ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಸ್ವಾವಲಂಬಿ ಬದುಕಿಗಾಗಿ ಮೊಬೈಲ್ ಕ್ಯಾಂಟೀನ್ ನಡೆಸುವುದಲ್ಲದೆ ತಾಲೂಕಿಗೆ ಒಂದು ಸೂಪರ್ ಮಾರ್ಕೆಟ್ ಮಾಡುವ ಚಿಂತನೆ ಇದೆ ಎಂದು ಜಿಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ್ ಹೇಳಿದರು. ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಲಕ್ಷ್ಮೀ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ಗದ್ದನಕೇರಿ ಕ್ರಾಸ್‌ ನಲ್ಲಿ ಸಂಜೀವಿನಿ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ಸಂಜೀವಿನಿ ಅಭಿಯಾನದಡಿ ಸೂಪರ್ ಪಾಸ್ಟ್ ಫುಡ್ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗಿದೆ ಎಂದರು.
  • < previous
  • 1
  • ...
  • 320
  • 321
  • 322
  • 323
  • 324
  • 325
  • 326
  • 327
  • 328
  • ...
  • 373
  • next >
Top Stories
ಮಹಾರಾಷ್ಟ್ರ ಚುನಾವಣೆಯಲ್ಲಿ 35 ಲಕ್ಷ ಮತಗಳ ಡಿಲೀಟ್
ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಸೀಮಂತ ಶಾಸ್ತ್ರ
ನಟ ಸಂತೋಷ್‌ಗೆ ಜಾಂಡೀಸ್‌: ಆರೋಗ್ಯ ಸ್ಥಿತಿ ಗಂಭೀರ, ಚಿಕಿತ್ಸೆ
ಪ್ರಜ್ವಲ್‌ ರೇವಣ್ಣಗೆ ಕಂಟಕವಾದ 5 ಅಂಶಗಳು
ಪ್ರಜ್ವಲ್ ಪ್ರಕರಣದ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ : ಡಾ.ಸಿ.ಎನ್.ಮಂಜುನಾಥ್
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved