ಭಾರತೀಯ ಸಂಸ್ಕೃತಿಯ ವೈಭವ ಮರುಸ್ಥಾಪನೆಯಾಗಲಿ1947ಕ್ಕೂ ಪೂರ್ವದಲ್ಲಿ ಭಾರತದಲ್ಲಿದ್ದ ಆಚಾರ-ವಿಚಾರಗಳು, ಆಹಾರ ಪದ್ಧತಿ ಇಂದು ಉಳಿದಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿ ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂದು ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕರ್ತ ಶ್ರೀನಿವಾಸ ಪಾಟೀಲ ಹೇಳಿದರು. ಅವರು, ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಸಾಂಸ್ಕೃತಿಕ ಘಟಕ, ಇತಿಹಾಸ ವಿಭಾಗ ಹಾಗೂ ಅಭ್ಯುದಯ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ’ಸಂಕಲ್ಪನಾ-2047 ರ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.