ಕುಟುಂಬ ಆರ್ಥಿಕ ಚೈತನ್ಯ ಹೆಣ್ಮಕ್ಕಳಿಂದ ಸಾಧ್ಯ: ಶಾಸಕ ಜೆ.ಟಿ. ಪಾಟೀಲಬೀಳಗಿ: ಗುಣಮಟ್ಟದ ರೊಟ್ಟಿ, ಚಟ್ನಿ, ಉಪ್ಪಿನಕಾಯಿ ಸೇರಿದಂತೆ ಎಲ್ಲ ತಿಂಡಿ, ತಿನಿಸು ತಯಾರಿಸಿದರೆ ಮಾರುಕಟ್ಟೆ ಅವಕಾಶ ಹೆಚ್ಚಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಿಮ್ಮ ಸಹಾಯಕ್ಕೆ ಬರಬಹುದು ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು. ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬಾಗಲಕೋಟೆ ಹಾಗೂ ಪಪಂ ಸಹಯೋಗದೊಂದಿಗೆ ಡೇ-ನಲ್ಮ್ ಯೋಜನೆಯ ಪಿಎಂ ಸ್ವ-ನಿಧಿ ಸೇ ಸಮೃದ್ಧಿ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸ್ವ-ನಿಧಿ ಸೇ ಸಮೃದ್ಧಿ ಯೋಜನೆಯ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.