ಕೊನೆವರೆಗೂ ಜೊತೆಗಿರೋದು ಕಲಿತ ವಿದ್ಯೆ ಮಾತ್ರ: ಎಸ್.ಬಿ. ಕೃಷ್ಣಗೌಡರಲೋಕಾಪುರ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವೂದೂ ಕೊನೆಯವರೆಗೂ ಉಳಿಯಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ. ಕೃಷ್ಣಗೌಡರ ಹೇಳಿದರು. ಪಟ್ಟಣದ ಆರ್.ಬಿ.ಜಿ. ಹೈಸ್ಕೂಲ್ ಶಾಲೆ ಆವರಣದಲ್ಲಿ ೧೯೯೭-೯೮ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ೧೯೯೯-೨೦೦೦ನೇ ಸಾಲಿ ಪಿಯುಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.