24*7 ನೀರು ಸರಬರಾಜು ಯೋಜನೆ ಯಶಸ್ವಿಗೊಳಿಸಿ: ಸಿಇಒ ಶಶಿಧರ ಕುರೇರಗ್ರಾಮೀಣ ಭಾಗದಲ್ಲಿ ದಿನ 24 ಗಂಟೆಗಳ ನೀರು ಸರಬರಾಜು ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಂತರರು, ಪಿಡಿಒಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ತಮ್ಮ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.