ನನ್ನ ಕಾಪಾಡಿ, ನಮ್ಮ ಯಜಮಾನ್ರು ಪ್ರಾಣ ಬಿಟ್ಟರು..!ಕಾಲ್ತುಳಿತಕ್ಕೆ ಸಿಲುಕಿದ್ದ ನಮ್ಮನ್ನು ಯಾರೂ ಕಾಪಾಡಲು ಬರಲಿಲ್ಲ. ನಾವು ಕೂಡ ಕೆಳಗೆ ಬಿದ್ದೆವು. 50ಕ್ಕೂ ಹೆಚ್ಚು ಜನರ ಗುಂಪು ನಮ್ಮ ಮೇಲೆ ಬಿದ್ದಿತ್ತು. ನಮ್ಮ ಸಹಾಯಕ್ಕೆ ಯಾರೂ ಬರಲಿಲ್ಲ. ನನ್ನ ಪತಿ ಅರುಣ ನನ್ನ ರಕ್ಷಣೆಗೆ ಧಾವಿಸಿದರು. ನನ್ನ ಪ್ರಾಣ ಉಳಿಸಿ, ಅವರು ತಮ್ಮ ಪ್ರಾಣ ಕಳೆದುಕೊಂಡರು..!