ಸಿರಿಧಾನ್ಯ, ಸಾವಯವ ಉತ್ಪನ್ನ ಬಳಸಿ ಆರೋಗ್ಯವಂತರಾಗಿ: ಶಿವನಗೌಡಆಧುನಿಕ ಜೀವನ ಶೈಲಿಯಿಂದಾಗಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಇತ್ತಾದಿ ರೋಗಗಳು ಮನುಷ್ಯರನ್ನು ಹೆಚ್ಚು ಬಾಧಿಸುತ್ತಿವೆ. ಇವುಗಳಿಂದ ಹೊರಬಂದು ಸಿರಿಧಾನ್ಯ ಮತ್ತು ಸಾವಯುವ ಉತ್ಪನ್ನ ಬಳಸುವುದು ಅತಿಮುಖ್ಯವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ ಹೇಳಿದರು.