ಚನ್ನಮ್ಮನ 200ನೇ ವಿಜಯೋತ್ಸವ: ಚನ್ನಮ್ಮಾಜಿ ಸಮಾಧಿ ಮುಂದೆ ಜರಗಿಸಲು ಆಗ್ರಹವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವ ಕಾರ್ಯಕ್ರಮವನ್ನು ಒಂದು ದಿನದ ಮಟ್ಟಿಗೆ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿ ಮುಂದೆ ಜರಗಿಸುವಂತೆ ಆಗ್ರಹಿಸಿ ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ಹಾಗೂ ಚನ್ನಮಾಜಿ ಅಭಿಮಾನ ಬಳಗದಿಂದ ಉಪವಿಭಾಗಧಿಕಾರಿ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಬೆಳಗಾವಿ ಜಿಲ್ಲಾಧಿಕಾರಿಗಳಿಗೆ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.