ಹನೂರಿನಲ್ಲಿ ಅವೈಜ್ಞಾನಿಕ ಕಾಮಗಾರಿ; ಅಪಾರ ಪ್ರಮಾಣದ ನೀರು ಪೋಲುಹನೂರಿನಲ್ಲಿ ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿ ಎಡ ಮತ್ತು ಬಲದಂಡೆ ನಾಲೆಗಳನ್ನು ಆರು ದಿನಗಳ ಕಾಲ 35 ಲಕ್ಷದಲ್ಲಿ ಗಿಡಗಂಟಿಗಳು, ರಾಡಿ ಸ್ವಚ್ಛಗೊಳಿಸಿ ಜಲಾಶಯದಿಂದ ನೀರು ನಾಲೆಗೆ ಬಿಡಲಾಗಿದೆ. ಆದರೆ, ಸಣ್ಣ ನೀರಾವರಿ ಇಲಾಖೆ ಚಾನಲ್‌ಗಳ ಅವೈಜ್ಞಾನಿಕವಾಗಿ ಮಾಡಲಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ರೈತರ ಜಮೀನುಗಳಿಗೆ ಹೋಗುವ ನೀರು ಪೋಲಾಗುತ್ತಿದೆ.