ಚಾಮರಾಜನಗರದಲ್ಲಿ ನೊಂದ ಕುಟುಂಬಕ್ಕೆ ನೌಕರಿ ನೀಡದ್ದಕ್ಕೆ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ಬಹಿಷ್ಕಾರವೈದ್ಯರ ನಿರ್ಲಕ್ಷ್ಯದಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ನಗರದ ಅಂಬೇಡ್ಕರ್ ಬಡಾವಣೆಯ ಗರ್ಭಿಣಿ ನೇತ್ರಾವತಿ ಮೃತಪಟ್ಟಿದ್ದು ಆ ಕುಟುಂಬದ ಒಬ್ಬರಿಗೆ ಹೊರಗುತ್ತಿಗೆ ಮೂಲಕ ನೌಕರಿ ನೀಡದೇ ಆರೋಗ್ಯ ಇಲಾಖೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ತಾಲೂಕು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಮುಖಂಡರು ಬಹಿಷ್ಕರಿಸಿದರು. ಚಾಮರಾಜನಗರದಲ್ಲಿ ತಾಲೂಕು ಮಟ್ಟದ ಎಸ್ಸಿ, ಎಸ್ಪಿ ಹಿತರಕ್ಷಣಾ ಸಮಿತಿ ಸಭೆಗೂ ಮುನ್ನ ಮುಖಂಡರು ಈ ತೀರ್ಮಾನ ಕೈಗೊಂಡರು.