ಸಂವಿಧಾನದ ಅಳಿವು. ಉಳಿವು ಬಗ್ಗೆ ಎಚ್ಚೆತ್ತುಕೊಳ್ಳಬೇಕು: ಸಾಹಿತಿ ಮಹದೇವಶಂಕನಪುರಸಮಾನತೆ, ಸ್ವಾತಂತ್ರ್ಯ ಭ್ರಾತೃತ್ವ, ಜಾತ್ಯತೀತತೆ ಪರಿಕಲ್ಪನೆಯುಳ್ಳ ಸಂವಿಧಾನಕ್ಕೆ ಇಂದು ದೊಡ್ಡ ಗಂಡಾಂತರ ಎದುರಾಗಿದ್ದು, ಅದರ ಅಳಿವು, ಉಳಿವಿನ ಬಗ್ಗೆ ಭಾರತೀಯರು ಆಲೋಚನೆ ಮಾಡಬೇಕಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಹದೇವ ಶಂಕನಪುರ ಅಭಿಪ್ರಾಯಪಟ್ಟರು. ಚಾಮರಾಜನಗರದಲ್ಲಿ ಭಾರತದ ಸಂವಿಧಾನ ಸಮರ್ಪಣಾ ದಿನಾಚರಣೆ- ೭೫ ಕಾರ್ಯಕ್ರಮದಲ್ಲಿ ಮಾತನಾಡಿದರು.