ಮೂಲಸೌಕರ್ಯ ಒದಗಿಸುವಲ್ಲಿ ಚಾಮರಾಜನಗರ ನಗರಸಭೆ ನಿರ್ಲಕ್ಷ್ಯ: ಸದಸ್ಯರ ಆರೋಪಚಾಮರಾನಗರದ ನಗರಸಭೆ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿ ಸ್ವಚ್ಛತೆಯೇ ಇಲ್ಲ. ಕಸವಿಲೇವಾರಿ ಆಗುತ್ತಿಲ್ಲ, ಕುಡಿಯುವ ನೀರು ಸಮರ್ಪಕವಾಗಿಲ್ಲ, ಚರಂಡಿಗಳೆಲ್ಲಾ ಹೂಳು ತುಂಬಿ ನಾರುತ್ತಿವೆ, ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ನಮ್ಮ ಮಾತಿಗೆ ನಗರಸಭೆಯಲ್ಲಿ ಬೆಲೆ ಇಲ್ಲ ಎಂದು ಆರೋಪಿಸಿ, ಸದಸ್ಯರು ಆಡಳಿತದ ವಿರುದ್ಧ ಮುಗಿ ಬಿದ್ದರು.