ಯಳಂದೂರಿನಲ್ಲಿ ಸಂಭ್ರಮದ ಸುಬ್ರಹ್ಮಣ್ಯ ಷಷ್ಠಿ ಹಬ್ಬಯಳಂದೂರು, ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತ ಶನಿವಾರ ಸಂಭ್ರಮ ಸಡಗರಗಳಿಂದ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ನಿಮಿತ್ತ ಬೆಳಗ್ಗೆಯಿಂದಲೇ ಈಶ್ವರ ದೇಗುಲ, ನಾಗರ ಕಲ್ಲುಗಳು ಹಾಗೂ ಹುತ್ತಕ್ಕೆ ಭಕ್ತರು ಹೂವು, ಹಣ್ಣು, ಹಾಲು ಎರೆದು ಭಕ್ತಿ ಮೆರೆದರು. ಸರತಿ ಸಾಲಿನಲ್ಲಿ ಪೂಜೆಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.