ಮರ ಕಡಿದು 3 ತಿಂಗಳಾದ್ರೂ ಕೇಸು ದಾಖಲಿಸದ ಆರ್‌ಎಫ್‌ಒ? ಕಳೆದ ಮೂರು ತಿಂಗಳ ಹಿಂದೆ ನೆಡು ತೋಪಿನಲ್ಲಿದ್ದ 20 ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ಲೇ ಔಟ್ ಮಾಲೀಕರು ಕಡಿದು ಹಾಕಿದ್ದು, ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಅಕ್ರಮವಾಗಿ ನೆಡು ತೋಪಿನ ಮರ ಕಡಿದ ಲೇ ಔಟ್ ಮಾಲೀಕರ ಮೇಲೆ ಕೇಸು ದಾಖಲಿಸಿ ಎಂದು ಎಸಿಎಫ್ ಜಿ ರವೀಂದ್ರ ಆರ್‌ಎಫ್‌ಒ ಮಂಜುನಾಥ್‌ಗೆ ಮೂರು ಬಾರಿ ನೋಟೀಸ್ ನೀಡಿದ್ದರೂ ಕೇಸು ದಾಖಲಿಸಿಲ್ಲ.