ರೈತಸಂಘದಿಂದ ಪಶು ಇಲಾಖೆಗೆ ಮುತ್ತಿಗೆಜಿಲ್ಲಾದ್ಯಂತ ಪಶು ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಯನ್ನು ಕೂಡಲೇ ಭರ್ತಿ ಮಾಡಿ, ಗ್ರಾಮೀಣ ಪ್ರದೇಶದ ಸೇವೆಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ, ಚಿಕಿತ್ಸೆ ನೀಡಲು ಹಣ ಕೇಳುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ರೈತ ಸಂಘದಿಂದ ಮಾ.೪ರಂದು ಮಂಗಳವಾರ ಜಾನುವಾರುಗಳ ಸಮೇತ ಪಶು ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲು ಅರಣ್ಯ ಇಲಾಖೆಯ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.