ಗಗನಮುಖಿಯಾದ ತೆಂಗಿನಕಾಯಿ ದರಸಾಮಾನ್ಯವಾಗಿ ತುಮಕೂರು,ತಿಪಟೂರು, ಹೊಸದುರ್ಗ ಮತ್ತು ನೆರೆಯ ತಮಿಳುನಾಡು,ಕೇರಳ, ಆಂಧ್ರಪ್ರದೇಶ ರಾಜ್ಯದ ಗಡಿ ಭಾಗಗಳಿಂದ ಹೆಚ್ಚಾಗಿ ತೆಂಗಿನಕಾಯಿ ಆವಕವಾಗುತ್ತಿತ್ತು. ಈಗ ಅಲ್ಲಿಂದ ಆವಕವಾಗುವುದು ಕಡಿಮೆಯಾಗುತ್ತಿದೆ. ಜೊತೆಗೆ, ಅಲ್ಲಿಯೇ ದರ ಹೆಚ್ಚಾಗಿದೆ. ಹಾಗಾಗಿ, ಜಿಲ್ಲೆಯಲ್ಲೂ ತೆಂಗಿನಕಾಯಿಯ ದರ ದುಪ್ಪಟ್ಟಾಗಿದೆ.