ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ವರ್ಗಾವಣೆಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ನಾಗೇಶ್ ಅವರು, ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೇ, ಯಾರ ಹಂಗೂ ಇಲ್ಲದೇ, ತಮಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಇದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದೇ ಪ್ರಥಮ ಬಾರಿಗೆ ಓರ್ವ ವರ್ಗಾವಣೆಗೊಂಡ ಎಸ್ಪಿಗೆ ಹೂ ಮಳೆಗೈದು, ಜೈಕಾರ ಹಾಕಿ ಬೀಳ್ಕೊಟ್ಟಿದ್ದಾರೆ.