ಪಠ್ಯ ಪುಸ್ತಕ ವಿವಾದ ರಾಜಕೀಯ ಪ್ರೇರಿತ: ಸಮ್ಮೇಳನಾಧ್ಯಕ್ಷ ಡಾ. ಬೆಳವಾಡಿ ಮಂಜುನಾಥ್ಚಿಕ್ಕಮಗಳೂರು, ಪಠ್ಯ ಪುಸ್ತಕ ವಿವಾದ ರಾಜಕೀಯ ಪ್ರೇರಿತ. ಪಠ್ಯ ಪುಸ್ತಕಗಳನ್ನು ತಜ್ಞರು ರಚಿಸಬೇಕೇ ಹೊರತು ರಾಜಕಾರಣಿಗಳ ಪ್ರವೇಶ ಸಲ್ಲದು. ರಾಜಕಾರಣಿಗಳು ತಜ್ಞರಾದರೆ ಪರವಾಗಿಲ್ಲ, ಆದರೆ, ಅದು ಸಾಮರಸ್ಯ ಕದಡುವಂತಾಗಬಾರದು ಎಂದು ಚಿಕ್ಕಮಗಳೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಕಿವಿ ಮಾತು ಹೇಳಿದರು.