ಸಂವಿಧಾನದ ಫಲಾನುಭವಿಗಳು ಸಮುದಾಯದವರನ್ನು ತಿರುಗಿ ನೋಡಬೇಕು: ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಚಿಕ್ಕಮಗಳೂರು, ಅಂಬೇಡ್ಕರ್ ಸಂವಿಧಾನದ ಹಕ್ಕುಗಳ ಫಲಾನುಭವಿಗಳಾಗಿ ಉನ್ನತ ಸ್ಥಾನ ಪಡೆದವರು ತಮ್ಮ ಸಮುದಾಯದವರನ್ನು ತಿರುಗಿ ನೋಡಬೇಕು, ಕೈಲಾದ ಸಹಾಯ ಮಾಡಬೇಕು, ಅಂಬೇಡ್ಕರ್ ಅವರಂತಾಗಲು ಪ್ರಯತ್ನಿಸಬೇಕು. ಅವರ ವಿಚಾರಧಾರೆಗಳನ್ನು ಎಲರಿಗೂ ತಲುಪಿಸುವ ಕೆಲಸ ಮಾಡಬೇಕು, ಆಗ ಮಾತ್ರ ಅಂಬೇಡ್ಕರ್ ಜಯಂತಿ, ಪರಿನಿಬ್ಬಾಣ ದಿನಾಚರಣೆಗಳಿಗೆ ಅರ್ಥ ಬರುತ್ತದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.