ಕಸ್ತೂರಿ ರಂಗನ್ ವರದಿ ಜಾರಿ, ಒತ್ತುವರಿ ತೆರವು ಆತಂಕದಲ್ಲಿ ಜನತೆಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಲ್ಲಿರುವ ಶೃಂಗೇರಿ ತಾಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೊಂದೆಡೆ ಒತ್ತುವರಿ ತೆರವು ಆದೇಶ. ಇವೆರೆಡು ತಾಲೂಕಿನ ಜನರ ನಿದ್ದೆಗೆಡಿಸುತ್ತಿದ್ದು , ತಲೆ ತಲಾಂತರದಿಂದ ಬದುಕು ಕಟ್ಟಿಕೊಂಡು ಬಂದಿರುವ ಕಾಡಂಚಿನ ಜನರ ಬದುಕಿನ ಮೇಲೆ ಕಸ್ತೂರಿ ರಂಗನ್ ವರದಿ, ತೂಗುಕತ್ತಿ ಬೀಸುತ್ತಿದೆ.