ಮಾಧವ ಗಾಡ್ಗೀಳ್ ವರದಿ ಪುನರ್ ವಿಮರ್ಶೆ ಅಗತ್ಯ: ಮನುಜೋಗಿಬೈಲುಮಾದವ ಗಾಡ್ಗೀಳ್ ವರದಿ ಪರಿಸರ ಸಂರಕ್ಷಣೆಗೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಇರುವ ಕೆಲ ಗೊಂದಲ ಮಯ ಅಂಶಗಳ ಪುನರ್ ಪರಿಶೀಲನೆ ಮಾಡಿ ಗೊಂದಲ ನಿವಾರಿಸಬೇಕು. ಹವಾಗುಣ ಬದಲಾವಣೆಯಿಂದ ಮಲೆನಾಡು ಭಾಗದಲ್ಲಿ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಕೊಳೆ ರೋಗಗಳ ಹೆಚ್ಚಳ ದಂತಹ ಸಮಸ್ಯೆ ಮತ್ತು ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳಿಂದ ಭೂಮಿ, ಗುಡ್ಡಕುಸಿತ, ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿವೆ.