ನಗರಸಭೆ ಅಧ್ಯಕ್ಷ -ಸದಸ್ಯರ ನಡುವೆ ಬೀದಿ ಜಗಳದಿಢೀರ್ ಧರಣಿ, ಏಕ ವಚನದಲ್ಲಿ ವಾಕ್ ಸಮರ, ಅಸಂವಿಧಾನಿಕ ಪದಗಳ ಬಳಕೆ, ಕೈ ಕೈ ಮಿಲಾಸಿಯುವ ಹಂತಕ್ಕೆ ತಲುಪಿದ ಜಗಳ, ಸಮಾಧಾನಪಡಿಸಿದ ಸ್ಥಳೀಯರು.- ಇದು, ಸಾಮಾನ್ಯ ಜನರ ನಡುವೆ ನಡೆದ ಘಟನೆಯಾಗಿದ್ದರೆ ಜನರ ಕಣ್ಣಿಗೆ ಅಷ್ಟೇನೂ ಕಾಣುತ್ತಿರಲಿಲ್ಲ. ಚಿಕ್ಕಮಗಳೂರು ನಗರದ ಗೌರಿ ಕಾಲುವೆಯ 60 ಅಡಿ ರಸ್ತೆಯಲ್ಲಿರುವ ಸಹರಾ ಶಾದಿ ಮಹಲ್ ಬಳಿ ಸೋಮವಾರ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಅವರದೇ ಬಿಜೆಪಿ ಪಕ್ಷದ ನಗರಸಭೆ ಸದಸ್ಯ ಮಧುಕುಮಾರ್ ರಾಜ್ ಅರಸ್ ನಡುವೆ ನಡೆದ ಬೀದಿ ಜಗಳದ ಮುಖ್ಯಾಂಶ.