ಕಾಫಿಯ ನಾಡಲ್ಲಿ ಕಾಡಾನೆಗಳ ಕಾರುಬಾರುಕಾಫಿಯ ನಾಡು ಕಾಡಾನೆಗಳ ಬೀಡು ಆಗ್ತಾ ಇದೀಯಾ ?- ಈ ಪ್ರಶ್ನೆ ಕಳೆದ 6 ತಿಂಗಳಿಂದ ಜನರ ನಡುವೆ ಮಾತ್ರವಲ್ಲ, ಅರಣ್ಯ ಇಲಾಖೆ ಮುಂದೆಯೂ ಓಡಾಡುತ್ತಿದೆ. ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳಲ್ಲಿ ಕಳೆದ 6 ತಿಂಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಕಾಡಾನೆಗಳು ಜನ ವಸತಿ ಪ್ರದೇಶಗಳಲ್ಲಿ ಕಂಡು ಬಂದಿವೆ. ಈಗಲೂ ಕೂಡ ಹಲವೆಡೆ ಬೀಡು ಬಿಟ್ಟಿವೆ. ಹೆಣ್ಣು, ಗಂಡು ಮರಿ ಆನೆಗಳೊಂದಿಗೆ ರಾಜಾರೋಷವಾಗಿ ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ಜೀವನದಲ್ಲಿ ಇದೇ ಮೊದಲ ಬಾರಿಗೆ ಆನೆಗಳ ಹಿಂಡನ್ನು ಕಣ್ಣು ತುಂಬಾ ನೋಡಿ ಖುಷಿ ಆಯ್ತು ಎಂದು ಗ್ರಾಮೀಣ ಭಾಗದ ಜನರು ಹೇಳುತ್ತಿದ್ದಾರೆ.