ನಾಳೆಯಿಂದ ಗಾನಯೋಗಿ ಗವಾಯಿಗಳ ಜಯಂತ್ಯುತ್ಸವ ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ ಜಯಂತ್ಯುತ್ಸವದ ಅಂಗವಾಗಿ ಫೆ.22 ಮತ್ತು 23 ರಂದು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಪ್ರಥಮ ಬಾರಿಗೆ ಸರಿಗಮ ಸಂಗೀತ ನಾಯಕೋತ್ಸವ ಆಯೋಜಿಸಲಾಗಿದೆ. ಗದಗದ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ಕಲಾವಿದರು ಸಂಗೀತ ನಾಟಕ ಪ್ರದರ್ಶನ ಮಾಡಲಿದ್ದಾರೆ ಎಂದು ನಾಟಕೋತ್ಸವ ಸಮಿತಿ ಕಾರ್ಯದರ್ಶಿ ಸುಜೀತ ಕುಲಕರ್ಣಿ ತಿಳಿಸಿದರು