ಅನುದಾನ ತನ್ನಿ ಅಂದ್ರೆ ಯೋಜನೆ ಬಗ್ಗೆ ಮಾಹಿತಿ ಕೇಳ್ತಾರೆಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ವಿಚಾರವಾಗಿ ಶಾಸಕ ವೀರೇಂದ್ರ ಪಪ್ಪಿ ಬೆಳಗಾವಿ ಅಧಿವೇಶನದಲ್ಲಿ ಕೇಳಿರುವ ಪ್ರಶ್ನೆಗಳು ಕೋಟೆನಾಡು ಚಿತ್ರದುರ್ಗದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿದ್ದು, ಇಂತಹ ಪ್ರಶ್ನೆಗಳ ಕೇಳೋಕೆ ಅಧಿವೇಶನವೇ ಆಗಬೇಕಾ ಎಂಬ ಉದ್ಗಾರಗಳು ಜನರ ಕಡೆಯಿಂದ ಕೇಳಿ ಬರುತ್ತಿವೆ. ಅನುದಾನ ತಂದು ಕಾಮಗಾರಿ ಮುಗಿಸಿ ಅಂದ್ರೆ, ಶಾಸಕರು ಯೋಜನೆ ಬಗ್ಗೆ ಈಗ ಮಾಹಿತಿ ಪಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಆಕ್ರೋಶಗಳು ಮಾರ್ದನಿಸುತ್ತಿವೆ.